ಚಂದನ್ ಶೆಟ್ಟಿ 'ಬಿಗ್ ಬಾಸ್' ಯಾವ ಕಾರಣಕ್ಕೆ ಗೆಲ್ಲಬೇಕಂತೆ ಗೊತ್ತಾ ! | Filmibeat Kannada

2018-01-20 1,087

'ಬಿಗ್ ಬಾಸ್' ಮೇಲೆ... ಸಹ ಸ್ಪರ್ಧಿಗಳ ಮೇಲೆ... ಕ್ಷಣಾರ್ಧದಲ್ಲೇ ಹಾಡುಗಳನ್ನ ಸಂಯೋಜಿಸಿ 'ದೊಡ್ಮನೆ'ಯೊಳಗೆ ಮಸ್ತ್ ಮನರಂಜನೆ ಕೊಡುತ್ತಿರುವವರು ಚಂದನ್ ಶೆಟ್ಟಿ. ಹೀಗಾಗಿ ಚಂದನ್ ಶೆಟ್ಟಿಗೆ ದೊಡ್ಡ ಅಭಿಮಾನಿ ಬಳಗವೇ ಸೃಷ್ಟಿಯಾಗಿದೆ. ಹಾಗ್ನೋಡಿದ್ರೆ, 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಚಂದನ್ ಶೆಟ್ಟಿ ನಾಮಿನೇಟ್ ಆಗಿರುವುದು ಕೆಲವೇ ಕೆಲವು ಬಾರಿ. ಡೇಂಜರ್ ಝೋನ್ ಗೆ ಬಂದಾಗೆಲ್ಲ ಸುಲಭವಾಗಿ ಬಚಾವ್ ಆಗಿರುವ ಚಂದನ್ ಶೆಟ್ಟಿ ಇದೀಗ ಟಾಪ್ 7 ಹಂತದಲ್ಲಿದ್ದಾರೆ.

ಕೆಲ ಸ್ಪರ್ಧಿಗಳು ಹೇಳುವಂತೆ ಹಾಗೂ ಹಲವು ವೀಕ್ಷಕರು ಅಭಿಪ್ರಾಯ ಪಟ್ಟಿರುವಂತೆ ಚಂದನ್ ಶೆಟ್ಟಿ 'ಬಿಗ್ ಬಾಸ್' ಗೆಲ್ಲುತ್ತಾರೆ. 'ಬಿಗ್ ಬಾಸ್ ಕನ್ನಡ-5' ಟ್ರೋಫಿ ಚಂದನ್ ಶೆಟ್ಟಿ ಪಾಲಾಗುತ್ತಾ.? ಎಂಬ ಪ್ರಶ್ನೆಗೆ ಈಗಲೇ ಉತ್ತರ ಕೊಡುವುದು ಕಷ್ಟ. ಆದರೂ, ಒಂದ್ವೇಳೆ ಚಂದನ್ ಶೆಟ್ಟಿ ವಿನ್ನರ್ ಆದರೆ ತಮ್ಮ ತಂದೆಯ ಆಸೆಯನ್ನ ಈಡೇರಿಸುತ್ತಾರಂತೆ.!
Big Boss Kannada season 5 is in its final stage . And every contestant wants to be the winner as he has come so close. And Chandan Shetty has her own reasons to win the show

Videos similaires